Tuesday, January 8, 2008

ಯೋಗೀಶ್ ಭಟ್ರು ಚುನಾವಣೆಗೆ ಹೊರಟ್ರು

ಸಾವಿರ ಕೋಟಿ ಅಭಿವೃದ್ಧಿ!


ಮಂಗಳೂರು: ಇನ್ನೆರಡು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವುದು ಖಾತ್ರಿ. ಮೂರು ವರ್ಷದ ಬಳಿಕ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧಗೊಳ್ಳುತ್ತಿವೆ. ಮಂಗಳೂರಿನ ಮಾಜಿ ಶಾಸಕ ನಂದಾವರ ಯೋಗೀಶ್ ಭಟ್ ೧,೮೫೯ ಕೋಟಿ ರೂ. ಮೊತ್ತದ ‘ಅಭಿವೃದ್ಧಿ ಮಾಡಿರುವ’ ಪಟ್ಟಿಯೊಂದಿಗೆ ನಾಲ್ಕನೇ ಬಾರಿಗೆ ಶಾಸಕರಾಗಲು ಹೊರಟಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಚಾಲನೆ ಎಂಬಂತೆ ಮೊನ್ನೆಯಷ್ಟೇ ಬಿಜೆಪಿಯ ಪ್ರಮುಖ ನಾಯಕರನ್ನು ಕರೆಸಿ, ವಿಕಾಸ ಸಮಾವೇಶ ನಡೆಸಿದ ಯೋಗೀಶ್ ಭಟ್, ಜನಸೇವೆಯ ಪಥದಲ್ಲಿ ... ಎಂಬ ಎಂಟು ಪುಟಗಳ ತಮ್ಮ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿದ್ದಾರೆ.
2004ರ ಏಪ್ರಿಲ್ ತಿಂಗಳಲ್ಲಿ ಶಾಸಕಾಗಿ ಆಯ್ಕೆಯಾಗಿದ್ದ ಅವರು, 2007ರ ಅಕ್ಟೋಬರ್ ತನಕ ಬಹುಕೋಟಿ ಅಂದರೆ ೧೮೫೯.೦೪ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಇಷ್ಟೇ ಅಲ್ಲ, ಭಟ್ ಅಧ್ಯಕ್ಷರಾಗಿದ್ದ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮಕ್ಕೆ ಎಂಟು ತಿಂಗಳಲ್ಲಿ ೭೦ ಕೋಟಿ ಲಾಭ ಬಂದಿದೆ. ೧೫೨ ಕೋಟಿ ವಸೂಲಾತಿ ಆಗಿದೆ!
ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಸರಕಾರಿ ಜಮೀನಿನ ಅಕ್ರಮ ಭೂ ಒತ್ತುವರಿ ಪತ್ತೆ ಹಚ್ಚುವ ಸಮಿತಿ ಸದಸ್ಯರಾಗಿ ೫೦ ಸಾವಿರ ಕೋಟಿ ರೂ. ಬೆಲೆ ಬಾಳುವ ಬೇರೆ, ಬೇರೆ ಜಮೀನು ಆಕ್ರಮಣ, ವಶೀಕರಣ, ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದ ಅಕ್ರಮ ದಾಖಲಾತಿ ಪತ್ತೆ ಹಚ್ಚುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ತೆರಿಗೆ ಸಂಗ್ರಹ ಕುರಿತ ವರದಿ ಮಂಡಿಸಿ ೨೫ ಕೋಟಿ ಆದಾಯ ಬರುವಂತೆ ಮಾಡಿದ್ದಾರೆ. ೨,೫೦೦ ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆಯಂತೆ. ಇದೆಲ್ಲಾ ಭಟ್ ಅವರ ಕೈಪಿಡಿಯಲ್ಲಿರುವ ಕೋಟಿ ಕೋಟಿ ಮೊತ್ತದ ಅಂಕಿ ಅಂಶ.ಈ ಸಾವಿರಾರು ಕೋಟಿ ರೂ. ಕಾಮಗಾರಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಜಿಜ್ಞಾಸೆ ಮೂಡುವುದು ಸಾಮಾನ್ಯ. ನಿಜ ಹೇಳಬೇಕೆಂದರೆ ಈ ಸಾವಿರಾರು ಕೋಟಿ ರೂ. ಸಂಪೂರ್ಣ ಖರ್ಚಾದದ್ದಲ್ಲ. ಇದರಲ್ಲಿ ಕಾಮಗಾರಿ ನಡೆದುದು, ಹಣ ಮಂಜೂರಾದುದು, ಮಂಜೂರಾಗಬೇಕಾದುದು, ಪ್ರಸ್ತಾವನೆಯಲ್ಲಿರುವುದು, ಭರವಸೆ, ಇನೋಸಿಸ್ ನೆರವು, ಬ್ಯಾಂಕ್‌ಗಳ ಕೊಡುಗೆ ಇತ್ಯಾದಿಗಳೆಲ್ಲಾ ಸೇರಿವೆ.ಅವರು ಸ್ವಕ್ಷೇತ್ರ ಮಟ್ಟದಲ್ಲಿ ನಡೆಸಿರುವ ಸಾಧನೆ ಬಗ್ಗೆ ತಿಳಿಸುತ್ತಾ ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ೪೦ ಕೋಟಿ ರೂ. ವೆಚ್ಚದ ತುಂಬೆ ಎರಡನೇ ಹಂತದ ಕಾಮಗಾರಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ. ಆದರೆ, ೪೦ ಕೋಟಿ ಭರವಸೆ ಕಡತದಲ್ಲೇ ಇದೆ. ಪೂರ್ತಿ ಹಣ ಸರಕಾರ ನೀಡುವುದಿಲ್ಲವಂತೆ. ಆ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ ಎನ್ನುತ್ತಾರೆ ಅಕಾರಿಗಳು.ಅವರ ಕನಸಾದ ಮಿನಿ ವಿಧಾನಸೌಧಕ್ಕೆ ಸರಕಾರದಿಂದ ಎರಡು ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ನದಿ ಕೊರತೆ ತಡೆ ಗೋಡೆ, ಚರಂಡಿ ದುರಸ್ತಿಯ ಎರಡು ಕೋಟಿ ರೂ. ಮಂಜೂರಾತಿಯಷ್ಟೇ ಆಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಘಟಕಕ್ಕೆ ಇನ್‌ಫೋಸಿಸ್ ನೀಡಿದ ಆರು ಕೋಟಿ ರೂ., ವೈದ್ಯಕೀಯ ಉಪಕರಣಕ್ಕೆ ಸರಕಾರ ನೀಡಿದ ೪ ಕೋಟಿ, ನಾಲ್ಕು ವರ್ಷಗಳಲ್ಲಿ ಲೇಡಿಗೋಷನ್/ ವೆನ್ಲಾಕ್ ಆಸ್ಪತ್ರೆಗೆ ಔಷಧಕ್ಕಾಗಿ ಸರಕಾರ ಬಿಡುಗಡೆ ಮಾಡಿದ ೧೫ ಕೋಟಿ ಕೂಡ ಕೈಪಿಡಿಯಲ್ಲಿ ದೆ.ಈ ಎರಡು ಸರಕಾರಿ ಆಸ್ಪತ್ರೆಗಳಿಗೆ ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವಿಜಯಾ ಬ್ಯಾಂಕ್, ಡಾ.ಡಿ.ವೀರೇಂದ್ರ ಹೆಗ್ಗಡೆ, ರೋಟರಿ ಕ್ಲಬ್, ಮಂಗಳೂರು ರಿಲೀಫ್ ಸೊಸೈಟಿ, ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್, ಇನ್‌ಫೋಸಿಸ್ ಫೌಂಡೇಶನ್‌ನ ಪ್ರೇರಣಾ ಸಂಸ್ಥೆ, ದಯಾನಂದ ಪೈ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಪೈಂಟ್ ಡೀಲರ್ಸ್ ಅಸೋಸಿಯೇಶನ್, ಮುಂಬಯಿ ಫಾರ್ಸಿ ಫೌಂಡೇಶನ್ ಮೊದಲಾದವವರು ನೀಡಿದ ಕೊಡುಗೆಗಳ ಪಟ್ಟಿಯೂ ಭಟ್ಟರ ಸಾಧನೆಯಲ್ಲಿದೆ.ಈ ಪಟ್ಟಿಯಲ್ಲಿ ಇನ್ನೂ ನೂರಾರು ಕೋಟಿ ರೂ.ಗಳ ಯೋಜನೆ ಇದ್ದು, ಮೀನುಗಾರಿಕಾ ಬಂದರಿನ ೫೦ ಕೋಟಿ, ನೇತ್ರಾವತಿ ಸೇತುವೆಯಿಂದ ಕೂಳೂರು ಸೇತುವೆ ತನಕದ ೫೦೦ ಕೋಟಿ ವೆಚ್ಚದ ಮಂಗಳಾ ಕಾರ್ನಿಶ್ ರಸ್ತೆ, ೧೫ ಕೋಟಿ ವೆಚ್ಚದ ರಂಗ ಮಂದಿರ, ೫೦ ಕೋಟಿ ವೆಚ್ಚದ ಸಬ್ ಸ್ಟೇಷನ್, ೭೫ ಕೋಟಿ ರೂ. ವೆಚ್ಚದ ಗಾಲ್ ಕೋರ್ಸ್ ನಿರ್ಮಾಣ, ತಣ್ಣೀರುಬಾವಿಯ ೧೦ ಎಕರೆ ಸ್ಥಳದಲ್ಲಿ ಮರೈನ್ ಅಕ್ವೇರಿಯಂ ಇತ್ಯಾದಿ ಇವೆ. ಲೋಕೋಪಯೋಗಿ ಇಲಾಖೆಯ ೧೦ ಕೋಟಿ ವೆಚ್ಚದ ಯೋಜನೆಪ್ರಸ್ತಾಪವೂ ಇದೆ.ಕೆಲವು ತಿಂಗಳ ಹಿಂದೆ ಕುಂದಾಪುರದಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ವಿರುದ್ಧ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಯೋಗೀಶ್ ಭಟ್ ಭಾಗವಹಿಸಿದ್ದರು. ಇದು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಆ ಹಲ್ಲೆ ಖಂಡಿಸಿದ್ದ ಮರಿಯಮ್ಮ ಥೋಮಸ್‌ಗೆ ಬಿಜೆಪಿ ಮನಪಾ ಚುನಾವಣಾ ಟಿಕೆಟ್ ನಿರಾಕರಿಸಿತ್ತು. ಆದ್ದರಿಂದ ಯೋಗೀಶ್ ಭಟ್ಟರಿಗೂ ಟಿಕೆಟ್ ಸಿಗದು ಎಂಬ ಸುದ್ದಿ ಹರಡಿಸಲಾಗುತ್ತಿತ್ತು.ಇದೀಗ ಮೊನ್ನೆ ನಡೆದ ವಿಕಾಸ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹಾಗೂ ಇತರ ಪದಾಕಾರಿಗಳು ಭಾಗವಹಿಸಿರುವುದು ನೋಡಿದರೆ ನಾಲ್ಕನೇ ಬಾರಿಗೆ ರ್ಸ್ಪಸಲು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

No comments: