Saturday, March 15, 2008

ಫ್ಲ್ಯಾಟ್ನಲ್ಲಿ ವೀಳ್ಯ ಬಳ್ಳಿ!



ಮಂಗಳೂರು ಫಳ್ನೀರ್ ರಸ್ತೆಯ ಎಂಪಿಸಿಎಲ್ ಕಾಂಪ್ಲೆಕ್ಸ್ ಎಂಬ ಬಹುಮಹಡಿಗಳ ವಸತಿ ಸಮುಚ್ಚಯದಲ್ಲಿ ವೀಳ್ಯದ ಎಲೆಯ ಬಳ್ಳಿಯು ಎತ್ತರಕ್ಕೆ ಬೆಳೆಯುತ್ತಾ ಹೋತ್ತಿದೆ. ಇದು ಗೋಡೆ ಮೇಲೆ ಚಿತ್ತಾರ ಮೂಡಿಸಿದಂತೆ ಗಮನ ಸೆಳೆಯುತ್ತಿದೆ.

Tuesday, January 8, 2008

ತಾಯ್ತನದ ಸಿರಿ ಸಂಭ್ರಮಕೆ, ತವರ ಹರಕೆಯ ಉಡುಗೊರೆಯಂತೆ

ಮಡಿಲು ಕಾರ್ಯಕ್ರಮ

ತಾಯ್ತನದ ಸಿರಿ ಸಂಭ್ರಮಕೆ, ತವರ ಹರಕೆಯ ಉಡುಗೊರೆಯಂತೆ ಸುರಕ್ಷಿತ ಬಾಣಂತನಕ್ಕೆ ಅಗತ್ಯ ವಸ್ತುಗಳ ಕಿಟ್. ಸರಳವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಅದೇ ಮಡಿಲು ಕಾರ್ಯಕ್ರಮ. ತಾಯ್ತನದ ಒಡಲು, ತುಂಬಿತು ಮಡಿಲು ಎಂಬುದು ಇದರ ಧ್ಯೇಯ.
ಇಂದಿನ ದುಬಾರಿ ಯುಗದಲ್ಲಿ ಬಡವರು ಜೀವನ ನಡೆಸುವುದೇ ಕಷ್ಟ. ಬಡ ಮಹಿಳೆಯರಿಗೆ ಹೆರಿಗೆ ನೋವಿನ ಜತೆಗೆ ದುಬಾರಿ ಆಸ್ಪತ್ರೆ, ಔಷಧಗಳ ಬಿಲ್ಲು ಬೇನೆಯನ್ನು ಇಮ್ಮಡಿಗೊಳಿಸುತ್ತದೆ. ಹೀಗಿರುವಾಗ ತಾಯಿ, ಮಗುವಿಗೆ ಅವಶ್ಯವಿರುವ ಗುಣಮಟ್ಟದ ವಸ್ತುಗಳ ಖರೀದಿ ಸಾಧ್ಯವೇ ಇರುವುದಿಲ್ಲ.ಇದನ್ನು ಗಮನಿಸಿರುವ ಸರಕಾರ, ಬಡತನ ರೇಖೆಗಿಂತ ಕೆಳಗಿನ ಮಹಿಳೆಯರ ಹೆರಿಗೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ಮುಖ್ಯವಾಗಿ ತಾಯಿ- ಮಗುವಿಗೆ ಆರೋಗ್ಯಕರ ಬಾಣಂತನ ದೊರಕಿಸಿ ಕೊಡಲು ಹಾಗೂ ಇಂದಿಗೂ ಮನೆಗಳಲ್ಲೇ ನಡೆಯುವ ಅಸುರಕ್ಷಿತ ಹೆರಿಗೆ ತಪ್ಪಿಸಿ, ಗರ್ಭಿಣಿ ತಾಯಂದಿರುವ ಹೆರಿಗೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವಂತೆ ಉತ್ತೇಜಿಸಲು ಈ ಅಪೂರ್ವ ಯೋಜನೆಯನ್ನು ಸೆ.೧೫ರಂದು ಜಾರಿಗೆ ತಂದಿದೆ.
ಮಡಿಲು ಕಾರ್ಯಕ್ರಮದಲ್ಲಿ ಹೆರಿಗೆ ಬಳಿಕ ಬಾಣಂತಿಯರಿಗೆ ಒಂದು ವೈದ್ಯಕೀಯ ಕಿಟ್ ನೀಡಲಾಗುತ್ತದೆ. ಈ ಕಿಟ್‌ಗಳನ್ನು ಪೂರೈಸಲು ಸರಕಾರ ಕಳೆದ ಬಜೆಟ್‌ನಲ್ಲಿ ಐದು ಕೋಟಿ ರೂ. ಮೀಸಲಿಟ್ಟಿದೆ.

ಕಿಟ್‌ನಲ್ಲಿ ೧೯ ವಿಧದ ಸಾಮಗ್ರಿಗಳಿರುತ್ತವೆ.

  1. ಸೊಳ್ಳೆ ಪರದೆ(ತಾಯಿಗೆ)- ಮಲೇರಿಯಾಗ್ರಸ್ತ ೨೦ ಜಿಲ್ಲೆಗಳಿಗೆ ಮಾತ್ರ
  2. ಜಮಖಾನ (ಮೀಡಿಯಂ ಸೈಜ್)
  3. ಬೆಡ್‌ಶೀಟ್ (ಮೀಡಿಯಂ ಸೈಜ್)
  4. ತಾಯಿಗೆ ದಪ್ಪನೆ ಹೊದಿಕೆ (ಮೀಡಿಯಂ)
  5. ತಾಯಿಗೆ ಮೈಸೂರು ರೋಸ್ ಸೋಪು
  6. ಬಟ್ಟೆ ಒಗೆಯುವ ಸಾಬೂನು ಮೈಸೂರ್ ಡಿಟರ್ಜೆಟ್ ಕೇಕ್(ಎಂಡಿಸಿ)
  7. ತಾಯಿಗೆ ಹೊಟ್ಟೆಗೆ ಕಟ್ಟುವ ಬಟ್ಟೆ೮.
  8. ಸ್ಯಾನಿಟರಿ ಪ್ಯಾಡ್ಸ್(ಕುಣಿಕೆ ಇರುವ ಚೌಕ ಕಾಟನ್ ಬಟ್ಟೆ)
  9. ತಾಯಿಗೆ ಬಾಚಣಿಕೆಯೊಂದಿಗೆ ಕೊಬ್ಬರಿ ಎಣ್ಣೆ
  10. ತಾಯಿಗೆ ಟವೆಲ್]
  11. ತಾಯಿಗೆ ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್
  12. ಮಗುವಿಗೆ ರಬ್ಬರ್ ಶೀಟ್
  13. ಮಗುವಿಗೆ ರಬ್ಬರ್ ಶೀಟ್ ಮೇಲೆ ಬೆಡ್‌ಶೀಟ್
  14. ಮಗುವಿಗೆ ಹೊದಿಕೆ
  15. ಮಗುವಿಗೆ ಮೈಸೂರು ಸ್ಯಾಂಡಲ್ ಬೇಬಿ ಸಾಬೂನು ಹಾಗೂ ಪೌಡರ್
  16. ಮಗುವಿಗೆ ಡೈಪರ್
  17. ಮಗುವಿಗೆ ಜಬ್ಲ
  18. ಮಗುವಿಗೆ ಸ್ವೆಟರ್ ಕುಲಾವಿ, ಕಾಲುಚೀಲ
  19. ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್

ಎರಡು ಲಕ್ಷ ಫಲಾನುಭವಿ

ರಾಜ್ಯದಲ್ಲಿ ೨೦೦೧ ಜನಗಣತಿ ಪ್ರಕಾರ ೫,೨೮,೫೦,೫೬೨ ಜನಸಂಖ್ಯೆ ಇದೆ. ಈ ಪೈಕಿ ಶೇ.೭೦ರಷ್ಟು ಬಡತನ ರೇಖೆಗಿಂತ ಕೆಳಗಿನವರಿದ್ದಾರೆ. ರಾಜ್ಯದಲ್ಲಿ ಒಟ್ಟು ೧೦ ಲಕ್ಷ ಹೆರಿಗೆಗಳು ಪ್ರತಿವರ್ಷ ಆಗುತ್ತಿದೆ. ಆ ಪೈಕಿ ಸುಮಾರು ಏಳು ಲಕ್ಷ ಹೆರಿಗೆ ಮಾಡಿಸಿಕೊಳ್ಳುವ ತಾಯಂದಿರು ಬಡತನ ರೇಖೆಗಿಂತ ಕೆಳಗಿನವರು. ಇದರಲ್ಲಿ ಶೇ.೪೦ರಷ್ಟು ಎರಡು ಮಕ್ಕಳ ಸಂತಾನ ಹೊಂದಿದ ಮಹಿಳೆಯರು. ಇದರಂತೆ ಎರಡು ಲಕ್ಷ ತಾಯಂದಿರು ವರ್ಷಕ್ಕೆ "ಮಡಿಲು’ ಯೋಜನೆ ಫಲಾನುಭವಿಗಳಾಗುತ್ತಾರೆ.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವವರ ಸಂಖ್ಯೆ ಶೇ.೬೭ರಷ್ಟು ಇದೆ. ಇದನ್ನು ೨೦೧೦ಕ್ಕೆ ಶೇ.೯೦ರಷ್ಟು ಹೆಚ್ಚಳ ಮಾಡುವ ಉದ್ದೇಶವಿದೆ. ಈ ಗುರಿ ತಲುಪಲು "ಮಡಿಲು’ ಕಾರ್ಯಕ್ರಮ ಸಹಕಾರಿಯಾಗಲಿದೆ.

* ಉದ್ದೇಶ

ಕಡು ಬಡ ವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ/ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ ಕಾಪಾಡುವುದು.ರಾಜ್ಯದಲ್ಲಿ ತಾಯಂದಿರ ಮರಣ ಮತ್ತು ಶಿಶು ಮರಣ ಪ್ರಮಾಣ ಗಣನೀಯ ತಗ್ಗಿಸುವುದು.ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು.

ಫಲಾನುಭವಿಗಳು

* ಬಡತನ ರೇಖೆಗಿಂತ ಕೆಳಗಿನವರು * ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡವರು * ಎರಡು ಮಕ್ಕಳಿಗೆ ಸೀಮಿತವಾಗಿರುವವರು * ಜನನಿ ಸುರಕ್ಷಾ ಯೋಜನೆ ಕಾರ್ಡ್ ಹೊಂದಿರುವವರು * ಬಡತನ ರೇಖೆಗಿಂತ ಕೆಳಗಿದ್ದು ಬಿಪಿಎಲ್ ಕಾರ್ಡ್ ಹೊಂದಿಲ್ಲದವರು, ಸಂಬಂಧಪಟ್ಟ ತಹಸೀಲ್ದಾರರಿಂದ ಬಿಪಿಎಲ್‌ಗೆ ಸಮಾನಾಂತರವಾದ ದೃಡೀಕರಣ ಪತ್ರ ಪಡೆದುಕೊಂಡು ಈ ಸೌಲಭ್ಯ ಪಡೆಯಬಹುದು.ಸೂಚನೆ* ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದವರಿಗೆ ಈ ಸೌಲಭ್ಯ ಸಿಗುವುದಿಲ್ಲ * ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಸ್ತ್ರೀಯರು ಸಾಧ್ಯವಾದಷ್ಟು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.

ಯೋಗೀಶ್ ಭಟ್ರು ಚುನಾವಣೆಗೆ ಹೊರಟ್ರು

ಸಾವಿರ ಕೋಟಿ ಅಭಿವೃದ್ಧಿ!


ಮಂಗಳೂರು: ಇನ್ನೆರಡು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವುದು ಖಾತ್ರಿ. ಮೂರು ವರ್ಷದ ಬಳಿಕ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧಗೊಳ್ಳುತ್ತಿವೆ. ಮಂಗಳೂರಿನ ಮಾಜಿ ಶಾಸಕ ನಂದಾವರ ಯೋಗೀಶ್ ಭಟ್ ೧,೮೫೯ ಕೋಟಿ ರೂ. ಮೊತ್ತದ ‘ಅಭಿವೃದ್ಧಿ ಮಾಡಿರುವ’ ಪಟ್ಟಿಯೊಂದಿಗೆ ನಾಲ್ಕನೇ ಬಾರಿಗೆ ಶಾಸಕರಾಗಲು ಹೊರಟಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಚಾಲನೆ ಎಂಬಂತೆ ಮೊನ್ನೆಯಷ್ಟೇ ಬಿಜೆಪಿಯ ಪ್ರಮುಖ ನಾಯಕರನ್ನು ಕರೆಸಿ, ವಿಕಾಸ ಸಮಾವೇಶ ನಡೆಸಿದ ಯೋಗೀಶ್ ಭಟ್, ಜನಸೇವೆಯ ಪಥದಲ್ಲಿ ... ಎಂಬ ಎಂಟು ಪುಟಗಳ ತಮ್ಮ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿದ್ದಾರೆ.
2004ರ ಏಪ್ರಿಲ್ ತಿಂಗಳಲ್ಲಿ ಶಾಸಕಾಗಿ ಆಯ್ಕೆಯಾಗಿದ್ದ ಅವರು, 2007ರ ಅಕ್ಟೋಬರ್ ತನಕ ಬಹುಕೋಟಿ ಅಂದರೆ ೧೮೫೯.೦೪ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಇಷ್ಟೇ ಅಲ್ಲ, ಭಟ್ ಅಧ್ಯಕ್ಷರಾಗಿದ್ದ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮಕ್ಕೆ ಎಂಟು ತಿಂಗಳಲ್ಲಿ ೭೦ ಕೋಟಿ ಲಾಭ ಬಂದಿದೆ. ೧೫೨ ಕೋಟಿ ವಸೂಲಾತಿ ಆಗಿದೆ!
ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಸರಕಾರಿ ಜಮೀನಿನ ಅಕ್ರಮ ಭೂ ಒತ್ತುವರಿ ಪತ್ತೆ ಹಚ್ಚುವ ಸಮಿತಿ ಸದಸ್ಯರಾಗಿ ೫೦ ಸಾವಿರ ಕೋಟಿ ರೂ. ಬೆಲೆ ಬಾಳುವ ಬೇರೆ, ಬೇರೆ ಜಮೀನು ಆಕ್ರಮಣ, ವಶೀಕರಣ, ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದ ಅಕ್ರಮ ದಾಖಲಾತಿ ಪತ್ತೆ ಹಚ್ಚುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ತೆರಿಗೆ ಸಂಗ್ರಹ ಕುರಿತ ವರದಿ ಮಂಡಿಸಿ ೨೫ ಕೋಟಿ ಆದಾಯ ಬರುವಂತೆ ಮಾಡಿದ್ದಾರೆ. ೨,೫೦೦ ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆಯಂತೆ. ಇದೆಲ್ಲಾ ಭಟ್ ಅವರ ಕೈಪಿಡಿಯಲ್ಲಿರುವ ಕೋಟಿ ಕೋಟಿ ಮೊತ್ತದ ಅಂಕಿ ಅಂಶ.ಈ ಸಾವಿರಾರು ಕೋಟಿ ರೂ. ಕಾಮಗಾರಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಜಿಜ್ಞಾಸೆ ಮೂಡುವುದು ಸಾಮಾನ್ಯ. ನಿಜ ಹೇಳಬೇಕೆಂದರೆ ಈ ಸಾವಿರಾರು ಕೋಟಿ ರೂ. ಸಂಪೂರ್ಣ ಖರ್ಚಾದದ್ದಲ್ಲ. ಇದರಲ್ಲಿ ಕಾಮಗಾರಿ ನಡೆದುದು, ಹಣ ಮಂಜೂರಾದುದು, ಮಂಜೂರಾಗಬೇಕಾದುದು, ಪ್ರಸ್ತಾವನೆಯಲ್ಲಿರುವುದು, ಭರವಸೆ, ಇನೋಸಿಸ್ ನೆರವು, ಬ್ಯಾಂಕ್‌ಗಳ ಕೊಡುಗೆ ಇತ್ಯಾದಿಗಳೆಲ್ಲಾ ಸೇರಿವೆ.ಅವರು ಸ್ವಕ್ಷೇತ್ರ ಮಟ್ಟದಲ್ಲಿ ನಡೆಸಿರುವ ಸಾಧನೆ ಬಗ್ಗೆ ತಿಳಿಸುತ್ತಾ ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ೪೦ ಕೋಟಿ ರೂ. ವೆಚ್ಚದ ತುಂಬೆ ಎರಡನೇ ಹಂತದ ಕಾಮಗಾರಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ. ಆದರೆ, ೪೦ ಕೋಟಿ ಭರವಸೆ ಕಡತದಲ್ಲೇ ಇದೆ. ಪೂರ್ತಿ ಹಣ ಸರಕಾರ ನೀಡುವುದಿಲ್ಲವಂತೆ. ಆ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ ಎನ್ನುತ್ತಾರೆ ಅಕಾರಿಗಳು.ಅವರ ಕನಸಾದ ಮಿನಿ ವಿಧಾನಸೌಧಕ್ಕೆ ಸರಕಾರದಿಂದ ಎರಡು ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ನದಿ ಕೊರತೆ ತಡೆ ಗೋಡೆ, ಚರಂಡಿ ದುರಸ್ತಿಯ ಎರಡು ಕೋಟಿ ರೂ. ಮಂಜೂರಾತಿಯಷ್ಟೇ ಆಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಘಟಕಕ್ಕೆ ಇನ್‌ಫೋಸಿಸ್ ನೀಡಿದ ಆರು ಕೋಟಿ ರೂ., ವೈದ್ಯಕೀಯ ಉಪಕರಣಕ್ಕೆ ಸರಕಾರ ನೀಡಿದ ೪ ಕೋಟಿ, ನಾಲ್ಕು ವರ್ಷಗಳಲ್ಲಿ ಲೇಡಿಗೋಷನ್/ ವೆನ್ಲಾಕ್ ಆಸ್ಪತ್ರೆಗೆ ಔಷಧಕ್ಕಾಗಿ ಸರಕಾರ ಬಿಡುಗಡೆ ಮಾಡಿದ ೧೫ ಕೋಟಿ ಕೂಡ ಕೈಪಿಡಿಯಲ್ಲಿ ದೆ.ಈ ಎರಡು ಸರಕಾರಿ ಆಸ್ಪತ್ರೆಗಳಿಗೆ ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವಿಜಯಾ ಬ್ಯಾಂಕ್, ಡಾ.ಡಿ.ವೀರೇಂದ್ರ ಹೆಗ್ಗಡೆ, ರೋಟರಿ ಕ್ಲಬ್, ಮಂಗಳೂರು ರಿಲೀಫ್ ಸೊಸೈಟಿ, ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್, ಇನ್‌ಫೋಸಿಸ್ ಫೌಂಡೇಶನ್‌ನ ಪ್ರೇರಣಾ ಸಂಸ್ಥೆ, ದಯಾನಂದ ಪೈ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಪೈಂಟ್ ಡೀಲರ್ಸ್ ಅಸೋಸಿಯೇಶನ್, ಮುಂಬಯಿ ಫಾರ್ಸಿ ಫೌಂಡೇಶನ್ ಮೊದಲಾದವವರು ನೀಡಿದ ಕೊಡುಗೆಗಳ ಪಟ್ಟಿಯೂ ಭಟ್ಟರ ಸಾಧನೆಯಲ್ಲಿದೆ.ಈ ಪಟ್ಟಿಯಲ್ಲಿ ಇನ್ನೂ ನೂರಾರು ಕೋಟಿ ರೂ.ಗಳ ಯೋಜನೆ ಇದ್ದು, ಮೀನುಗಾರಿಕಾ ಬಂದರಿನ ೫೦ ಕೋಟಿ, ನೇತ್ರಾವತಿ ಸೇತುವೆಯಿಂದ ಕೂಳೂರು ಸೇತುವೆ ತನಕದ ೫೦೦ ಕೋಟಿ ವೆಚ್ಚದ ಮಂಗಳಾ ಕಾರ್ನಿಶ್ ರಸ್ತೆ, ೧೫ ಕೋಟಿ ವೆಚ್ಚದ ರಂಗ ಮಂದಿರ, ೫೦ ಕೋಟಿ ವೆಚ್ಚದ ಸಬ್ ಸ್ಟೇಷನ್, ೭೫ ಕೋಟಿ ರೂ. ವೆಚ್ಚದ ಗಾಲ್ ಕೋರ್ಸ್ ನಿರ್ಮಾಣ, ತಣ್ಣೀರುಬಾವಿಯ ೧೦ ಎಕರೆ ಸ್ಥಳದಲ್ಲಿ ಮರೈನ್ ಅಕ್ವೇರಿಯಂ ಇತ್ಯಾದಿ ಇವೆ. ಲೋಕೋಪಯೋಗಿ ಇಲಾಖೆಯ ೧೦ ಕೋಟಿ ವೆಚ್ಚದ ಯೋಜನೆಪ್ರಸ್ತಾಪವೂ ಇದೆ.ಕೆಲವು ತಿಂಗಳ ಹಿಂದೆ ಕುಂದಾಪುರದಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ವಿರುದ್ಧ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಯೋಗೀಶ್ ಭಟ್ ಭಾಗವಹಿಸಿದ್ದರು. ಇದು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಆ ಹಲ್ಲೆ ಖಂಡಿಸಿದ್ದ ಮರಿಯಮ್ಮ ಥೋಮಸ್‌ಗೆ ಬಿಜೆಪಿ ಮನಪಾ ಚುನಾವಣಾ ಟಿಕೆಟ್ ನಿರಾಕರಿಸಿತ್ತು. ಆದ್ದರಿಂದ ಯೋಗೀಶ್ ಭಟ್ಟರಿಗೂ ಟಿಕೆಟ್ ಸಿಗದು ಎಂಬ ಸುದ್ದಿ ಹರಡಿಸಲಾಗುತ್ತಿತ್ತು.ಇದೀಗ ಮೊನ್ನೆ ನಡೆದ ವಿಕಾಸ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹಾಗೂ ಇತರ ಪದಾಕಾರಿಗಳು ಭಾಗವಹಿಸಿರುವುದು ನೋಡಿದರೆ ನಾಲ್ಕನೇ ಬಾರಿಗೆ ರ್ಸ್ಪಸಲು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

Monday, January 7, 2008

ಕಾಂಗ್ರೆಸ್ ಅಲ್ಪಸಂಖ್ಯಾತ ಪಟ್ಟಿ ಬಿಡುಗಡೆ



ವಿ.ಕ. ಸುದ್ದಿಲೋಕ
ಮಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಅಧ್ಯಕ್ಷರ ಪಟ್ಟಿಬಿಡುಗಡೆ ಮಾಡಿದ್ದು, ಜಿಲ್ಲೆಯನ್ನು ಪಕ್ಷದ ಸಂಘಟನಾ ಚಟುವಟಿಕೆ ತೀವ್ರಗೊಳಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮೊಯ್ದಿನ್ ಬಾವ ತಿಳಿಸಿದ್ದಾರೆ.ಅಲ್ಪಸಂಖ್ಯಾತ ಕ್ರೈಸ್ತ, ಮುಸ್ಲಿಂ, ಜೈನ ಸಮುದಾಯಕ್ಕೆ ಸರಕಾರಿ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ, ವಿವಿಧ ಸಾಂಸ್ಕೃತಿಕ ಪರಂಪರೆ ಉತ್ತೇಜನಗೊಳಿಸುವ ಮತ್ತು ಸಾಮರಸ್ಯದ ವಾತಾರವಣ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಹೇಳಿದರು.ಜಿಲ್ಲಾ ಪದಾಧಿಕಾರಿಗಳುಅಧ್ಯಕ್ಷ- ಮೊಯ್ದಿನ್ ಬಾವ, ಉಪಾಧ್ಯಕ್ಷರು- ಜೊಹರಾ ನಿಸಾರ್, ಬಿ.ಅಬೂಬಕ್ಕರ್ ಕುದ್ರೋಳಿ, [ಷ್ಪರಾಜ್ ಜೈನ್, ಎ.ಸಿ.ಜೈರಾಜ್, ಎಚ್.ಎಂ.ಅಶ್ರಫ್, ಅಬ್ದುಲ್ ಖಾದರ್ ಬೆಳ್ಮ, ಅರುಣ್ ಕುವೆಲ್ಲೊ. ಪ್ರಧಾನ ಕಾರ್ಯದರ್ಶಿಗಳು- ಅಬ್ದುಲ್ ಅಝೀಝ್ ಹಕ್, ಸತೀಶ್ ಪೆಂಗಾಲ್, ವಿಲ್ಫ್ರೆಡ್ ಸಲ್ದಾನ, ಅಬ್ದುಲ್ ಸತ್ತಾರ್, ನೂರುದ್ದೋನ್ ಸಾಲ್ಮರ, ಅಬ್ದುಲ್ ರವೂಫ್, ಹಾರಿಸ್ ಮಂಚಿ, ರೋಶನ್ ಕುಂಪಲ, ರೆಮಿಸ್ ಡಿಸೋಜ, ಆಲ್ಫ್ರೆಡ್ ಡಿಸೋಜ, ಮುಹಮ್ಮದ್ ಕೋಟೆಕಾರ್, ಕ್ಲೇರ ಕುಂಪಲ.ಸಂಚಾಲಕರು- , ಅಬ್ದುಲ್ ರಹ್ಮಾನ್ ಅರಿಯಡ್ಕ, ಕೆ.ಎಂ.ಶರೀಫ್, ಅನೂಪ್ ವಿಕ್ಟರ್ ಮೋರಸ್, ಅಬ್ದುಲ್ ರಝಾಕ್ ಬಸ್ತಿಕಾರ್, ಟಿ.ಎಸ್.ಅಬ್ದುಲ್ಲಾ, ಹಮೀದ್ ಕಣ್ಣೂರು.ಕಾರ್ಯಕಾರಿ ಸಮಿತಿ ಸದಸ್ಯರು- ಡೆನ್ನಿಸ್ ಡಿಸಿಲ್ವ ಪೆರ್ಮನ್ನೂರು, ಪಿ.ಎ.ಮುಹಮ್ಮದ್, ರಾಯ್ ಅಬ್ರಹಾಂ, ಗ್ರೆಟ್ಟಾ ರೆಬೆಲ್ಲೊ ಬಿಜೈ, ಮುನಿರಾಜ್ ಅಜ್ರಿ ಜೈನ್, ಕೆ.ಕೆ.ಶಾಹುಲ್ ಹಮೀದ್, ಕೆ.ಅಶ್ರಫ್, ಮೀರಾ ಸಾಹೇಬ್, ಕಬೀರ್ ಉಳ್ಳಾಲ್, ಶಂಸುದ್ದೀನ್, ಅಬ್ದುಲ್ ರವೂಫ್, ಅಬ್ದುಲ್ ಅಝೀಝ್, ಗುಲ್ಝಾರ್ ಬಾನು, ಮುಹಮ್ಮದ್ ಸಲೀಂ, ಓವೆನ್ ಪಿಂಟೊ ಬೆಳ್ಳಾರೆ, ಮುಹಮ್ಮದ್ ಮೋನು ಪಾವೂರು.ಬ್ಲಾಕ್ ಸಮಿತಿ ಅಧ್ಯಕ್ಷರುಸುಳ್ಯ- ಮುಹಮ್ಮದ್ ಕುಂಞಿ ಗೂನಡ್ಕ, ಪುತ್ತೂರು- ಮುಹಮ್ಮದ್ ಬಡಗನ್ನೂರು, ಕಡಬ- ಎಚ್.ಆದಂ, ಬಂಟ್ವಾಳ- ಲತೀಫ್ ಬಗ್ಗ, ಗುರುಪುರ- ಖಾಲಿದ್ ಯೂಸುಫ್, ಮೂಡುಬಿದಿರೆ- ಲತೀಫ್ ಸಾಹೇಬ್, ಮೂಲ್ಕಿ- ಜೆಸ್ಸಿ ಪಿಂಟೊ, ಸುರತ್ಕಲ್- ಖಾದಿರ್ ಜೋಕಟ್ಟೆ, ಮಂಗಳೂರು ಉತ್ತರ ವಲಯ- ಮುಹಮ್ಮದ್, ಮಂಗಳೂರು ದಕ್ಷಿಣ- ಲ್ಯಾನ್ಸಿ ಸೆರಾವೊ.ಉಳ್ಳಾಲ- ಡೆನ್ನಿಸ್ ಡಿಸೋಜ ತೊಕ್ಕೊಟ್ಟು, ಪಾಣೆಮಂಗಳೂರು- ಡಿ.ಕೆ.ಹಂಝ ಮಂಚಿ, ಬೆಳ್ತಂಗಡಿ- ಉಮ್ಮರ್ ಕುಂಞಿ ಮುಸ್ಲಿಯಾರ್, ಉಪ್ಪಿನಂಗಡಿ- ವಿಎಂ.ಜೋಸೆಫ್, ವಿಟ್ಲ- ಬಿ.ವಿ.ಮಾಡ್ತ. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಐವನ್ ಡಿಸೋಜ, ಕೋಡಿಜಾಲ್ ಇಬ್ರಾಹಿಂ, ಅಲ್ಪಸಂಖ್ಯಾತ ವಿಭಾಗ ರಾಜ್ಯ ಕಾರ್ಯದರ್ಶಿ ಇದಿನಬ್ಬ, ವಿಲ್ಫ್ರೆಡ್ ಸಲ್ದಾನ, ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.....................ಹಜ್ ತರಬೇತಿಮಂಗಳೂರು: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಜ್ ಯಾತ್ರಿಕರಿಗೆ ತರಬೇತಿ ಕಾರ್ಯಕ್ರಮ ನ.೧೨ರಂದು ಬೆಳಗ್ಗೆ ೯.೩೦ಕ್ಕೆ [ರಭವನದಲ್ಲಿ ಏರ್ಪಡಿಸಲಾಗಿದೆ ಎಂದು ವಿಭಾಗ ಅಧ್ಯಕ್ಷ ಮೊಯ್ದಿನ್ ಬಾವ ತಿಳಿಸಿದ್ದಾರೆ.ಉಡುಪಿ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ತರಬೇತಿ ನೀಡಲಿದ್ದು, ಮಂಗಳೂರು ಸಹಾಯಕ ಖಾಝಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ ಮತ್ತು ಅಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಆಶೀರ್ವಚನ ನೀಡಲಿದ್ದಾರೆ..............

old port at mangalore-